ಕರ್ನಾಟಕ ರಾಜ್ಯದವರಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನವರಾದ ಎಸ್. ಅಂಗಾರ ಒಬ್ಬ ಭಾರತೀಯ ರಾಜಕಾರಣಿಯಾಗಿದ್ದಾರೆ. ಅವರು ಜನವರಿ 2021 ರಿಂದ ಕರ್ನಾಟಕ ರಾಜ್ಯದ ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವರಾಗಿದ್ದರು. ಅವರು ಕರ್ನಾಟಕ ವಿಧಾನಸಭೆಯಿಂದ ಆರು ಬಾರಿ ಎಂ.ಎಲ್.ಎ.ಯಾಗಿ ಆಯ್ಕೆಯಾಗಿ ವಿಧಾನ ಸಭೆಯ ಸದಸ್ಯರಾಗಿದ್ದಾರೆ. ೨೦೨೧೦ನೇ ಆಗಷ್ಟ್‌ ೦೪ ರಂದು ಎರಡನೇ ಬಾರಿಗೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. == ಆರಂಭಿಕ ಜೀವನ == ಅಂಗಾರ ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ದಾಸನಕಜೆ ಮನೆಯಲ್ಲಿ ಜನಿಸಿದರು. ಪ್ರಸ್ತುತ ಅಮರಮೂಡ್ನೂರು ಗ್ರಾಮದ ಕುಂಟಿಕಾನದಲ್ಲಿ ನೆಲೆಸಿದ್ದಾರೆ. ಅವರ ಆರಂಭಿಕ ಶಿಕ್ಷಣವು ಚೊಕ್ಕಾಡಿ ಪ್ರೌಢ ಶಾಲೆಯಲ್ಲಿ ಆಯಿತು. == ಕೌಟುಂಬಿಕ ವಿವರ == ಪತ್ನಿ-ವೇದಾವತಿ, ಮಗ-ಗೌತಮ್, ಮಗಳು-ಪೂಜಾಶ್ರೀ. == ಕ್ಷೇತ್ರ == ಸುಳ್ಯ ವಿಧಾನ ಸಭಾ(ಮೀಸಲು) ಕ್ಷೇತ್ರದಿಂದ ಅಂಗಾರ ಎಸ್ ಅವರು ೧೯೯೪ರಿಂದ ಸತತವಾಗಿ ಆರು ಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. === ಶಾಸಕರಾಗಿ ಗೆದ್ದ ವರ್ಷಗಳು === ೧೯೯೪, ೧೯೯೯, ೨೦೦೪, ೨೦೦೮, ೨೦೧೩, ೨೦೧೮, ಸತತ ಆರು ಅವಧಿಗಳಿಗೆ ಶಾಸಕರಾಗಿ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. == ಸಚಿವ ಸ್ಥಾನ == ಬಿ.ಎಸ್. ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಬಂದರು ಮತ್ತು ಮೀನುಗಾರಿಕಾ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು. ಬಸವರಾಜ ಬೊಮ್ಮಾಯಿ ಮಂತ್ರಿ ಮಂಡಲಕ್ಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರು. == ರಾಜಕೀಯ ಪಕ್ಷ == ಅಂಗಾರ ಅವರು ಭಾರತೀಯ ಜನತಾ ಪಕ್ಷದವರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಕರ್ನಾಟಕ ವಿಧಾನ ಸಭೆ ಪುತ್ತೂರು ವಿಧಾನಸಭಾ ಕ್ಷೇತ್ರ ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮